News & Events

ಶ್ರೀ ಶ್ರೀ ವಿಧುಶೇಖ‌ರ‌ ಭಾರ‌ತಿ ಮ‌ಹಾಸ್ವಾಮಿಗ‌ಳ ಅನುಗ್ರ‌ಹ‌

ಶೃಂಗೇರಿ ಜ‌ಗದ್ಗುರುಗ‌ಳ‌ ಚಾರ್ತುಮಾಸ‌ ಪ್ರ‌ಯುಕ್ತ‌ ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ್ ಸ‌ಭಾದ‌ ವ‌ತಿಯಿಂದ ಶೃಂಗೇರಿಗೆ ತೆರ‌ಳಿ ಫ‌ಲ‌ ಸ‌ಮ‌ರ್ಪಿಸಿ ಅನುಗ್ರ‌ಹ‌ ಮಂತ್ರಾಕ್ಷ‌ತೆ ಪ‌ಡೆಯ‌ಲಾಯಿತು. ಮಂಗಳೂರಿನ ಶ್ರೀ ಸುಬ್ರ‌ಹ್ಮ‌ಣ್ಯ‌ ಸ‌ಭಾ ಆಡಳಿತದ ಪುತ್ತೂರಿನ‌ “ಶಿವ‌ ಸ‌ದ‌ನ‌” ಹಿರಿಯ‌ ನಾಗ‌ರಿಕ‌ರ‌ ವ‌ಸ‌ತಿ ನಿಲ‌ಯ‌ದ‌ಲ್ಲಿ ಸುಮಾರು 50 ಲ‌ಕ್ಷ ರುಪಾಯಿ ವೆಚ್ಚ‌ದ‌ಲ್ಲಿ ಪ್ರ‌ಥ‌ಮ‌ ಮ‌ತ್ತು ದ್ವಿತೀಯ‌ ಹಂತ ಗ‌ಳಿಗೆ ಲಿಪ್ಟ್, ಮೆಟ್ಟ‌ಲುಗ‌ಳು ಹಾಗು ಇತ‌ರ‌ ನ‌ವೀಕ‌ರ‌ಣ‌ ಕಾಮ‌ಗಾರಿಗ‌ಳ‌ನ್ನು ಹ‌ಮ್ಮಿಕೊಂಡಿದ್ದು ಶೃಂಗೇರಿ ಜ‌ಗ‌ದ್ಗುರು ಶ್ರೀ ಶ್ರೀ ವಿಧುಶೇಖ‌ರ‌ ಭಾರ‌ತಿ ಮ‌ಹಾಸ್ವಾಮಿಗ‌ಳ ದಿವ್ಯ‌ ಹ‌ಸ್ತ‌ದಿಂದ ಆಶೀರ್ವ‌ಚ‌ನ‌ ಮೂಲ‌ಕ‌ ಶಿಲೆ ಗ‌ಳನ್ನು ಪೂಜಿಸಿ, ಅನುಗ್ರ‌ಹ‌ ಪ‌ಡೆಯ‌ಲಾಯಿತು


ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ತ್ರಿಮತಸ್ಥ ಬ್ರಾಹ್ಮಣರು ಒಗ್ಗಟ್ಟಾಗಿದ್ದು ಸರಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯಬೇಕು ಮತ್ತು ತಮ್ಮ ಹಕ್ಕಿನ ಅವಶ್ಯಕತೆಗಳಿಗೆ ಸರಕಾರದ ಗಮನ ಸೆಳೆಯಲು ಸಫಲರಾಗಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಸಚ್ಚಿದಾನಂದ ಮೂರ್ತಿಗಳು ಬ್ರಾಹ್ಮಣರಿಗೆ ಕರೆ ನೀಡಿದರು. ಶ್ರೀ ಸುಬ್ರಹ್ಮಣ್ಯ ಸಭಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ಥಾನಿಕ ಬ್ರಾಹ್ಮಣ ಸಮಾಜವು ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಕಳೆದ ೧೧೨ ವರ್ಷಗಳಿಂದ ಬ್ರಾಹ್ಮಣ ಸಮಾಜದ ೧೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅತೀ ಕನಿಷ್ಠ ಬೆಲೆಯಲ್ಲಿ ವಸತಿ ವ್ಯವಸ್ಥೆಯನ್ನು ಮಾಡುತ್ತಿದ್ದು ಇದೀಗ ಪುತ್ತೂರಿನ `ಶಿವಸದನ’ದಲ್ಲಿ ಹಿರಿಯ ನಾಗರಿಕರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿನಿಲಯವನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯ ಸಹಕಾರ ಸಂಘವು ೮ ಶಾಖೆಗಳ ಮೂಲಕ ಸರ್ವರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿದೆ. ನಮ್ಮ ಮಂಡಳಿಯ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬ್ರಾಹ್ಮಣರ ಏಳಿಗೆಗೆ ನಾವೆಲ್ಲರೂ ಪ್ರಯತ್ನಿಸೋಣ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಭಾದ ಅಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೇದಿಗೆಯವರು ವಹಿಸಿಕೊಂಡಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ದ್ವಿತೀಯ ರ‍್ಯಾಂಕ್ ವಿಜೇತೆ ಕುಮಾರಿ ನಿಧಿ ರಾವ್‌ರವರನ್ನು ಸನ್ಮಾನಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಅವರಿಗೆ ಶ್ರೀ ಸುಬ್ರಹ್ಮಣ್ಯ ಸಭಾ ಮಂಡಳಿಯ ವತಿಯಿಂದ ಸನ್ಮಾನ ಮಾಡಿದರು
ಎಸ್.ಎಸ್.ಎಲ್.ಸಿ.ಯಲ್ಲಿ ದ್ವಿತೀಯ ರ‍್ಯಾಂಕ್ ವಿಜೇತೆ ಕುಮಾರಿ ನಿಧಿ ರಾವ್‌ರವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಸಚ್ಚಿದಾನಂದ ಮೂರ್ತಿ ಅವರಿಗೆ ಶ್ರೀ ಸುಬ್ರಹ್ಮಣ್ಯ ಸಭಾ ಮಂಡಳಿಯ ವತಿಯಿಂದ ಸನ್ಮಾನ ಮಾಡಿದರು

ಶಾರದಾಂಬಾ ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮದ ಬಳಿಕ ಪ್ರಾರ್ಥನೆಯನ್ನು ಶ್ರೀಮತಿ ಕುಸುಮಾ ನವೀನ್ ಕುಮಾರ್, ಶ್ರೀಮತಿ ಸ್ನೇಹಲತಾ ದಿವಾಕರ್, ಶ್ರೀಮತಿ ಪುಷ್ಪಾವತಿ ಶ್ರೀನಿವಾಸ್ ನಡೆಸಿದರು. ಬ್ರಹ್ಮಶ್ರೀ ಪ್ರತಾಪ್ ಶರ್ಮರು ವೇದಘೋಷ ಪಠಿಸಿದರೆ, ಬ್ರಹ್ಮಶ್ರೀ ವಾಗೀಶ ಶಾಸ್ತಿçಗಳು ಆರ್ಶೀವಚನ ನೀಡಿದರು. ಶ್ರೀ ಸಭಾದ ಕಾರ್ಯದರ್ಶಿ ಶ್ರೀ ಕರುಣ್ ರಾವ್ ಬೆಳ್ಳೆ ಸರ್ವರನ್ನ ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀ ಸಭಾದ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಾ ಪ್ರಭಾಕರ್, ಉಪಮೇಯರ್ ಶ್ರೀಮತಿ ಸುಮಂಗಲ ರಾವ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನಿರ್ದೇಶಕರಾದ ಶ್ರೀ ಶಿವರಾಂ ಉಡುಪ, ಶ್ರೀ ಪವನ ಕುಮಾರ್ ಆಸೀನರಾಗಿದ್ದರು. ಶ್ರೀಮತಿ ಶೈಲಜಾ ಶ್ರೀಕಾಂತ್, ಶ್ರೀಮತಿ ವಲ್ಲಿ ಜ್ಞಾನೇಶ್ ಸನ್ಮಾನಿತರ ಪರಿಚಯ ಮಾಡಿದರು. ಶ್ರೀ ಸಭಾದ ಉಪಾಧ್ಯಕ್ಷರಾದ ಡಾ. ಎ. ಪಿ. ಕೃಷ್ಣ ಧನ್ಯವಾದ ನೀಡಿದರು. ಶ್ರೀ ಸಭಾದ ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್ ಕಾರ್ಯಕ್ರಮ ನಿರೂಪಿಸಿದರು.


Guru Darshan

Shree Subrahmanya Sabha members visit to Sringeri

Guru Darshana – Every year during chaturmaasa, all Sthanika Brahmins, disciples of Sri Sringeri Mutt, undertakes pilgrimage to Sringeri for dharshan of Mataa Sharadhamba and His Holiness Jagadguru Sri Shankaraacharya


Cultural Programme at Shree Subrahmanya Sabha members

Vardhanti of Sri Jagadguru – Vardanthi of  Jagadguru Sri Shankaraacharya is being celebrated…every year with the active participation of all members of the Sabha.


Yakshagana at Subrahmanya Sabha

Sri Subrahmanya Sabha member’s Yakshgana  performance, during one of the functions.


Ashtami at Shree Subrahmanya Sabha

Ashtami Aacharane – Krishna Janmaasthami is being celebrated with all devotion and reverence, with large participation of kids.


Deepavali Celebration at Subrahmanya Sabha

Deepavali – Festival of light is celebrated with all fun and fair with the active participation of young and old.


Felicitations to Community members

Felicitations – Members with their extra ordinary work contributed to the society and become role models are being recognized and offered felicitation by the Sabha.


Shree Subrahmanya Sabha activities

Guru Darshana – Every year during chaturmaasa, all Sthanika Brahmins, disciples of Sri Sringeri Mutt, undertakes  pilgrimage to Sringeri for dharshan of Mataa Sharadhamba and His Holiness Jagadguru Sri Shankaraacharya.


Shree Subrahmanya Sabha Seva at Polali

Seva at Polali

Seva at Polali – Voluntary service offered by the members of the Sabha during the car festival of Sri Rajarajeswari Temple, Polali.


Back to Top